ಚಿತ್ರ: ರವಿಚಂದ್ರ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯನ: ಡಾ|ರಾಜ್ ಕುಮಾರ್

ನಸುನಗುತ ಬಾ ಚಿನ್ನ!
ನಲಿಯುತಿರೆ ನೀ ಚೆನ್ನ!
ಅಗಲೆನು.. ಅಳಿಸೆನು ಇನ್ನೆಂದು ನಿನ್ನಾ!|೨|

ಬಿಸಿಲು, ಮಳೆಗೆ.. ನೆರಳನು ನೀಡುವೆ
ಸಿಡಿಲೊ ಗುಡುಗೊ.. ಜೊತೆಯಲಿ ನಿಲ್ಲುವೆ |೨|..

ನೋವಾ ನುಂಗುವೆ!
ಸುಖವಾ ನೀಡುವೆ! |೨|
ಜೀವದ.. ಜೀವವೆ ನಾನಾಗಿ ಬಾಳುವೆ!

ನಸುನಗುತ ಬಾ ಚಿನ್ನಾ!
ನಲಿಯುತಿರೆ ನೀ ಚೆನ್ನಾ!

ಅಗಲೆನು.. ಅಳಿಸೆನು ಇನ್ನೆಂದು ನಿನ್ನಾ!

ನಿನ್ನಾ ನಡೆಗೆ ಹೃದಯವ ಹಾಸುವೇ
ನಿನ್ನಾ ನುಡಿಗೆ ಜೀವವಾ ತುಂಬುವೇ! |೨|..

ನಿನ್ನಾ ಕಣ್ಣಲೆ.. ಎಲ್ಲಾ ಕಾಣುವೆ |೨|
ಕಂಬನಿ.. ಮಿಡಿದರೆ ನಾ ಸೋತು ಹೋಗುವೆ!

ನಸುನಗುತ ಬಾ ಚಿನ್ನಾ!
ನಲಿಯುತಿರೆ ನೀ ಚೆನ್ನಾ!
ಅಗಲೆನು.. ಅಳಿಸೆನು ಇನ್ನೆಂದು ನಿನ್ನಾ!

ನಸುನಗುತ ಬಾ ಚಿನ್ನಾ!
ನಲಿಯುತಿರೆ ನೀ ಚೆನ್ನಾ ಅ

Category: ಕನ್ನಡ ಚಿತ್ರಸಾಹಿತ್ಯ
Category: ರವಿಚಂದ್ರ ಚಿತ್ರ
Category: ಚಿ.ಉದಯಶಂಕರ್ ಸಾಹಿತ್ಯ
Category:Kannadaವರ್ಗ:ಡಾ.ರಾಜ್‍ಕುಮಾರ್ ಗಾಯನ